Home Kannada ಹೊಸಪೇಟೆಯಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್​ ನಾಯ್ಕ್​​ ಸಹೋದರನ ವಿರುದ್ಧ ಕೇಸ್​

ಹೊಸಪೇಟೆಯಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್​ ನಾಯ್ಕ್​​ ಸಹೋದರನ ವಿರುದ್ಧ ಕೇಸ್​

by akash

ಹೊಸಪೇಟೆ (ವಿಜಯನಗರ): ವೃದ್ಧನ ಮೇಲೆ ಹಲ್ಲೆ‌ ಮಾಡಿದ್ದ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್​ ಸಹೋದರ ಪಿ. ಟಿ. ಶಿವಾಜಿ ಮೇಲೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಶರಣಾ ನಾಯ್ಕ್​ ಅವರ ಸಂಬಂಧಿಕರಾದ ಶ್ರೀದೇವಿ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಜೂನ್ 29 ರಂದು ಪಿ.ಟಿ. ಶಿವಾಜಿ ಅವರು ಶರಣಾ ನಾಯ್ಕ್ ಮೇಲೆ ಹಾರೆಕೋಲಿನಿಂದ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಹಲ್ಲೆ ಮಾಡಿದ್ದರು.

Related Posts

Leave a Comment