Home Kannada ಹೊಸಪೇಟೆ ಕೋರ್ಟ್​ ಆವರಣದಲ್ಲಿ ವಕೀಲನ ಹತ್ಯೆಯ ಮೈ ಜುಂ ಎನ್ನುವ ದೃಶ್ಯ

ಹೊಸಪೇಟೆ ಕೋರ್ಟ್​ ಆವರಣದಲ್ಲಿ ವಕೀಲನ ಹತ್ಯೆಯ ಮೈ ಜುಂ ಎನ್ನುವ ದೃಶ್ಯ

by Eha

ಹೊಸಪೇಟೆ: ಹಾಡಹಗಲೇ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನೆತ್ತರು ಹರಿದಿತ್ತು. ವಕೀಲನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣದಿಂದ ನೂತನ ವಿಜಯನಗರ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಕೋರ್ಟ್ ಆವರಣದಲ್ಲಿ ಕಾಂಗ್ರೆಸ್​ ಮುಖಂಡ ಮತ್ತು ವಕೀಲರಾಗಿದ್ದ ತಾರಿಹಳ್ಳಿ ವೆಂಕಟೇಶ (48) ಅವರನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿವೋರ್ವ ಹತ್ಯೆ ಮಾಡಿದ್ದ.

ವಕೀಲ ತಾರಿಹಳ್ಳಿ ವೆಂಕಟೇಶ ಅವರ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಕೌಟುಂಬಿಕ ಕಲಹದಿಂದ ಕೊಲೆ ನಡೆದಿತ್ತು. ಕೊಲೆ ಮಾಡಿದ ಆರೋಪಿ ಮನೋಜ್​, ವೆಂಕಟೇಶ ಅವರ ಸಂಬಂಧಿಕನಾಗಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈ ಜುಂ ಎನ್ನುವಂತಿದೆ.

Related Posts

Leave a Comment