Home Kannada ಹೋಳಿ ದಿನ ರಕ್ತದೋಕುಳಿ ಹರಿಸಿದ ಪುಂಡರು : ಬೂದಿ ಮುಚ್ಚಿದ ಕೆಂಡದಂತಾದ ಸೇಡಂ

ಹೋಳಿ ದಿನ ರಕ್ತದೋಕುಳಿ ಹರಿಸಿದ ಪುಂಡರು : ಬೂದಿ ಮುಚ್ಚಿದ ಕೆಂಡದಂತಾದ ಸೇಡಂ

by Eha

ಕಲಬುರಗಿ: ಸೇಡಂ ರಸ್ತೆಯ ಜಿಮ್ಸ್ ಆಸ್ಪತ್ರೆ ಎದುರು ಉದ್ರಿಕ್ತ ಯುವಕರ ಗುಂಪೊಂದು ವೀರತಾ ಉಪಾಧ್ಯ (28) ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದೆ. ಈ ಕೊಲೆಗೆ ಸುಂದರನಗರದ ಯುವಕರೇ ಕಾರಣ ಎಂದು ಆರೋಪಿಸಿ 100 ಯುವಕರ ತಂಡವು ಏಕಾಏಕಿ ಮಾರಕಾಸ್ತ್ರ ಹಿಡಿದು, ಗೂಂಡಾವರ್ತನೆ ತೋರಿದೆ. ಅಲ್ಲದೆ ಮೂರು ಕಾರು, 40ಕ್ಕೂ ಹೆಚ್ಚು ಬೈಕ್​​ಗಳನ್ನು ದ್ವಂಸ ಮಾಡಿ ಪರಾರಿಯಾಗಿದ್ದಾರೆ. ಹೋಳಿ ನಿಮಿತ್ತ ಬಣ್ಣ ಆಡಿದ್ದ ಯುವಕರು ಪಾನಮತ್ತರಾಗಿದ್ದರು. ಈ ಸಂದರ್ಭದಲ್ಲಿ ವೃದ್ಧೆಯೊಬ್ಬರ ಮನೆಯಲ್ಲಿ ದಾಂಧಲೆ ಮಾಡಿದ್ದಾರೆ. ಉದ್ರಿಕ್ತ ತಂಡದಿಂದ ತಪ್ಪಿಸಿಕೊಳ್ಳಲು ನಿವಾಸಿಗಳು ಮನೆಯ ಬಾಗಿಲು ಭದ್ರಪಡಿಸಿಕೊಂಡು ಒಳಗೆ ಅವಿತು ಕುಳಿತಿದ್ದರು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Related Posts

Leave a Comment