Home Kannada ಶ್ರೀ ಸಾಯಿನಾಥಾ ಮಿತ್ರ ಮಂಡಳಿ ದೊಂಬಿವಿಲಿ – 15ನೇ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

ಶ್ರೀ ಸಾಯಿನಾಥಾ ಮಿತ್ರ ಮಂಡಳಿ ದೊಂಬಿವಿಲಿ – 15ನೇ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

by akash

ಶ್ರೀ ಸಾಯಿನಾಥ ಮಿತ್ರ ಮಂಡಳಿ ದೊಂಬಿವಿಲಿ-15 ನೇ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ. ಚಿತ್ರ: ಧನಂಜಯ ಪೂಜಾರಿ. ವರದಿ : ಜಯರಾಮ್ ಪೂಜಾರಿ ದೊಂಬಿವಿಲಿಯ ಸಾಮಾಜಿಕ ಸಂಸ್ಥೆ ಶ್ರೀ ಸಾಯಿನಾಥ ಮಿತ್ರ ಮಂಡಳಿಯ 15ನೆ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಅ.15 ರಂದು ದೊಂಬಿವಿಲಿ ಪಶ್ಚಿಮ ಪೂರ್ಣಿಮಾ ಬ್ಯಾಂಕ್ವೆಟ್ ಹಾಲ್ ನಲ್ಲಿ ಶ್ರದ್ಧೆ,ಭಕ್ತಿಯಿಂದ ಜರಗಿತು. ಪ್ರಾರಂಭದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಮೂಲ ದೇವಿಯ ವಿಗ್ರಹಕ್ಕೆ ಪ್ರಾರ್ಥನೆ ಸಲ್ಲಿಸಿ ಆರತಿ ಬೆಳಗಲಾಯಿತು.ಬಳಿಕ ನಡೆದ ಕಿರು ಸಭಾ ಕಾರ್ಯಕ್ರಮಕ್ಕೆ ಬಂಟರ ಸಂಘ ದೊಂಬಿವಿಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರದ ಅಧ್ಯಕ್ಷ ಸೋಮನಾಥ ಪೂಜಾರಿ, ಶ್ರೀ ಜಗದಂಬ ಮಂದಿರ ದೊಂಬಿವಿಲಿಯ ಗೌ.ಕಾರ್ಯಧರ್ಶಿ ರಾಜೇಶ್ ಕೋಟ್ಯಾನ್ ,ಸಮಾಜ ಸೇವಕ ಪ್ರಕಾಶ್ ಶೆಟ್ಟಿ ದೀಪ ಬೆಳಗಿ ಚಾಲನೆ ನೀಡಿದರು.ಮಂಡಳಿಯ ಗೌರವ ಸ್ವೀಕರಿಸಿದ ಆನಂದ ಶೆಟ್ಟಿ ಎಕ್ಕಾರು ಮಾತನಾಡುತ್ತ ” ಸಾಯಿನಾಥ ಮಂಡಳಿಯ 15 ವರ್ಷಗಳ ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ಶ್ಲಾಘನೀಯ, ಕೊರೊನ ಮಹಾಮಾರಿಯಿಂದಾಗಿ ಬಹಳ ಸಮಯದ ಬಳಿಕ ಎಲ್ಲರೊಂದಿಗೆ ಬೆರೆತು ಸಂತಸವಾಯಿತು” ಎಂದರು. ಸೋಮನಾಥ ಪೂಜಾರಿ ತನ್ನ ಅನಿಸಿಕೆ ತಿಳಿಸುತ್ತಾ “ನಿರಂತರ ಸಮಾಜ ಪರ ಕಾರ್ಯಗಳಿಂದ ಮಾತ್ರ ಸಂಘ-ಸಂಸ್ಥೆಗಳು ಅಸ್ತಿತ್ವವನ್ನು ಉಳಿಸಿಕೊಳ್ಲಬಹುದು.ಮಂಡಳಿಯು ಎಲ್ಲಾ ಸಂಘಟನೆಗಳಿಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದೆ” ಎಂದರು. ಪ್ರಕಾಶ್ ಶೆಟ್ಟಿ ಮಾತನಾಡುತ್ತ “ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮೋಹನ್ ಸಾಲ್ಯಾನ್ ಎಲ್ಲರನ್ನೂ ಒಗ್ಗೂಡಿಸಿ ಉತ್ತಮ ಕಾರ್ಯ ಮಾಡಿದ್ದಾರೆ” ಎಂದರು. ಈ ಸಂಧರ್ಭದಲ್ಲಿ ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿಯ ಧರ್ಮಧರ್ಶಿ ಅಶೋಕ್ ದಾಸು ಶೆಟ್ಟಿ ,ಶ್ರೀ ರಾಧಕೃಷ್ಣ ಶನೀಶ್ವರ ಮಂದಿರದ ಅರ್ಚಕ, ಪುರೋಹಿತ ಪ್ರಾಕಾಶ್ ಭಟ್ ಕಾನಂಗಿ ಅವರನ್ನು ಸನ್ಮಾನಿಸಲಾಯಿತು.ಶ್ರೀ ಜಗದಂಬ ಮಂದಿರದ ಅಧ್ಯಕ್ಷ ಹರೀಶ್ ಶೆಟ್ಟಿ ,ಸಮಾಜ ಸೇವಕ ರತ್ನಾಕರ ಹೆಗ್ಡೆ ಅವರನ್ನು ಗೌರವಿಸಲಾಯಿತು.ಪ್ರಾರಂಭದಲ್ಲಿ ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್ ಪ್ರಾಸ್ತಾವಿಕ ಮಾತುಗಳನಾಡುತ “ತವರೂರಲ್ಲಿ 4 ಜನರಿಂದ ಸ್ಥಾಪನೆಯಾದ ಸಂಸ್ಥೆ ಇಂದು ಒಂದು ಪ್ರತಿಷ್ಠಿತ ಸಂಸ್ಥೆಯಾಗಿರುವದು ಹೆಮ್ಮೆಯ ವಿಷಯ ವಾಗಿದೆ. ಮಂಡಳಿಯ ಬೆಳವಣಿಗೆಗೆ ಎಲ್ಲರ ಪ್ರೀತಿ,ಸಹಕಾರ ಕಾರಣ” ಎಂದರು. ಬಳಿಕ ಪುರೋಹಿತ ಪ್ರಕಾಶ್ ಭಟ್ ಅವರ ಪೌರೋಹಿತ್ಯದಲ್ಲಿ ಮೋಹನ್ ಸಾಲ್ಯಾನ್ ದಂಪತಿಯ ಯಜಮಾಣಿಕೆಯಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಿತು.ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನೀಡಿದರು.ಕೊನೆಯಲ್ಲಿ ಅನ್ನ ಸಂತರ್ಪಣೆ ನಡೆಯಿತು.ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್, ಕಾರ್ಯಧ್ಯಕ್ಷ ಗಣೇಶ್ ಮೊಗವೀರ,ಉಪಾಧ್ಯಕ್ಷರುಗಳಾದ ಮೋಹನ್ ಪೂಜಾರಿ,ಆನಂದ ಶೆಟ್ಟಿ,ಗೌ.ಪ್ರ.ಕಾರ್ಯದರ್ಶಿ ಸುರೇಶ್ ಮೊಗವೀರ,ಕೋಶಾಧಿಕಾರಿ ವಾಸು ಮೊಗವೀರ, ಜತೆ ಕಾರ್ಯಧರ್ಶಿ ದಿನಕರ ಸಾಲ್ಯಾನ್,ಸಮಿತಿಯ ಸದಸ್ಯರುಗಳಾದ ರಘುರಾಮ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸುರೇಶ್ ಎನ್.ಬಿ., ಸೋಮನಾಥ ಪೂಜಾರಿ, ಬಾಲಕೃಷ್ಣ ಶೆಟ್ಟಿ, ವಸಂತ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್, ಬಾಲಕೃಷ್ಣ ಹೆಗ್ಡೆ, ವಿಠಲ್ ನಾಯಕ್, ಬಾಬು ಮೊಗವೀರ,ಧನಂಜಯ ಪೂಜಾರಿ, ಚಿನ್ಮಯ ಸಾಲ್ಯಾನ್, ಅಭಿಷೇಕ್ ಮೊಗವೀರ, ಸ್ವರಾಜ್ ಮೊಗವೀರ, ರೋಹಿತ್ ಮೊಗವೀರ ಸಹಕರಿಸಿದರು.

Related Posts

Leave a Comment