Home Kannada ಏಕಾಏಕಿ 3 ಕರಡಿಗಳ ದಾಳಿ: ರೈತನಿಗೆ ಗಾಯ

ಏಕಾಏಕಿ 3 ಕರಡಿಗಳ ದಾಳಿ: ರೈತನಿಗೆ ಗಾಯ

by Eha

ಹೊಸಪೇಟೆ (ವಿಜಯನಗರ): ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ‌ ತಾಂಡದಲ್ಲಿ ರೈತರನ ಮೇಲೆ ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿ ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿವೆ. ರೈತ ಕೇಶವನಾಯ್ಕ್ ( 56) ಕರಡಿಗಳ ದಾಳಿಗೆ ಒಳಗಾದವರು. ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿದಾಗ ಭಯಭೀತಗೊಂಡು, ಅಸ್ವಸ್ಥನಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ರೈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್​ಗೆ ದಾಖಲಿಸಲಾಗಿದೆ.

Related Posts

Leave a Comment