Home Kannada 45 ವರ್ಷದ ತಾಯಿಯನ್ನೇ ಕೊಂದ ಮಗ

45 ವರ್ಷದ ತಾಯಿಯನ್ನೇ ಕೊಂದ ಮಗ

by Eha

ಚಂಡೀಗಢ: 45 ವರ್ಷದ ಮಹಿಳೆಯನ್ನು ಮಗನೇ ತನ್ನ ಕೈಯಾರೇ ಕೊಲೆ ಮಾಡಿರುವ ಘಟನೆ ಭಾನುವಾರ ಪಂಜಾಬ್‍ನಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಊರ್ಮಿಳಾ ದೇವಿ ಎಂದು ಗುರುತಿಸಲಾಗಿದ್ದು, ಮೃತ ದೇಹ ಪಂಜಾಬ್‍ನ ಖೋತ್ರಾನ್ ಕಾಲೋನಿ ಬಳಿಯಿರುವ ಖಾಲಿ ಜಾಮೀನಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತಂತೆ ಮಾತನಾಡಿದ ಬೆಹ್ರಾಮ್ ಸ್ಟೇಷನ್ ಹೌಸ್ ಅಧಿಕಾರಿ ರಾಜೀವ್ ಕುಮಾರ್, ಮೃತ ಊರ್ಮಿಳರನ್ನು ಪುತ್ರ ದೀಪಕ್ ಕೊಲೆ ಮಾಡಿರುವುದಾಗಿ ಆರೋಪಿಸಿ ಆಕೆಯ ಮಗಳು ರೇಖಾ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಮಹಿಳೆ ಮೇಲೆ ತೀಕ್ಷ್ಣವಾದ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಆರೋಪಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲದೆ ಮಹಿಳೆ ಮುಖಕ್ಕೆ ತೀವ್ರವಾಗಿ ಗಾಯಗಳಾಗಿದ್ದು, ಆಕೆಯ ಸಂಬಂಧಿಕರು ಮೊದಲಿಗೆ ಮಹಿಳೆಯನ್ನು ಗುರುತು ಪತ್ತೆ ಮಾಡಲು ಕಷ್ಟಪಟ್ಟರು ಎಂದರು. ಇದೀಗ ಪೊಲೀಸರು ಪ್ರಕರಣ ಕುರಿತಂತೆ ತನಿಖೆಯನ್ನು ಮತ್ತುಷ್ಟು ಚುರುಕುಗೊಳಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Posts

Leave a Comment