Home Kannada Doctor’s Dayಯಂದೇ ರಕ್ಷಣೆಗಾಗಿ ಪೊಲೀಸ್​ ಠಾಣೆಗೆ ಓಡಿದ ವೈದ್ಯ..! ಹುಬ್ಬಳ್ಳಿಯಲ್ಲಿ ನಡೆದಿದ್ದೇನು?

Doctor’s Dayಯಂದೇ ರಕ್ಷಣೆಗಾಗಿ ಪೊಲೀಸ್​ ಠಾಣೆಗೆ ಓಡಿದ ವೈದ್ಯ..! ಹುಬ್ಬಳ್ಳಿಯಲ್ಲಿ ನಡೆದಿದ್ದೇನು?

by akash

ಹುಬ್ಬಳ್ಳಿ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯೊಬ್ಬರು ಮೃತಪಟ್ಟ ಪರಿಣಾಮ ಆಕ್ರೋಶಗೊಂಡ ಆಕೆಯ ಸಂಬಂಧಿಕರು ವೈದ್ಯರ ಮೇಲೆ‌ ಹಲ್ಲೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. ಜನತಾ ಬಜಾರ್​ನದಲ್ಲಿರುವ ಭಾಸ್ಕರ್​ ರಾವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಉಣಕಲ್‌ ಗ್ರಾಮದ ಶಾಂತಮ್ಮ‌ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಳಿಕ ಈ ಘಟನೆ ನಡೆದಿದೆ. ಶಾಂತಮ್ಮ ಸಾವಿನ ಬಳಿಕ ಆಕೆಯ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸಂಬಂಧಿಕರ ಆಕ್ರೋಶ ಕಂಡು ಬೆದರಿದ ವೈದ್ಯರು ಪಕ್ಕದಲ್ಲಿದ್ದ ಠಾಣೆಗೆ ಓಡಿ ರಕ್ಷಣೆ ಪಡೆದುಕೊಂಡಿದ್ದಾರೆ. ಡಾ.ಭಾಸ್ಕರ್​ ರಾವ್ ಎಲುಬು ಕೀಲು ಮತ್ತು ಅಪಘಾತ ಚಿಕಿತ್ಸಾ ಆಸ್ಪತ್ರೆಯಲ್ಲಿ ಶಾಂತಮ್ಮ ದಾಖಲಾಗಿದ್ದರು.‌ ಆದ್ರೆ ಮಹಿಳೆ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು ಆಕ್ರೋಶಗೊಂಡರು. ಶಾಂತಮ್ಮ ಸಂಬಂಧಿಕರು ವೈದ್ಯರು ಹಾಗೂ ಆಸ್ಪತ್ರೆಯಲ್ಲಿನ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ವೈದ್ಯರು ಮತ್ತು ಸಿಬ್ಬಂದಿ ಸಮೀಪದ ಪೊಲೀಸ್​ ಠಾಣೆಗೆ ಓಡಿ ರಕ್ಷಣೆ ಪಡೆದಿದ್ದಾರೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Comment