Home Kannada ಬಿಲ್ಲವರ ಎಸೋಸಿಯೇಶನಿನ ಮೂಲುಂಡ್ ಸ್ಥಳೀಯ ಕಛೇರಿಯ ನೂತನ ಕಾರ್ಯಕಾರೀ ಸಮಿತಿಯ ರಚನೆ. ನೂತನ ಕಾರ್ಯಾದ್ಯಕ್ಷರಾಗಿ ಶಂಕರ್. ಎಸ್. ಅಮೀನ್ ಆಯ್ಕೆ

ಬಿಲ್ಲವರ ಎಸೋಸಿಯೇಶನಿನ ಮೂಲುಂಡ್ ಸ್ಥಳೀಯ ಕಛೇರಿಯ ನೂತನ ಕಾರ್ಯಕಾರೀ ಸಮಿತಿಯ ರಚನೆ. ನೂತನ ಕಾರ್ಯಾದ್ಯಕ್ಷರಾಗಿ ಶಂಕರ್. ಎಸ್. ಅಮೀನ್ ಆಯ್ಕೆ

by akash

ಚಿತ್ರ ವರದಿ: ಉಮೇಶ್. ಕೆ.ಅಂಚನ್ ..9324759589 ಬಿಲ್ಲವರ ಎಸೋಸಿಯೇಶನಿನ ಮೂಲುಂಡ್ ಸ್ಥಳೀಯ ಕಛೇರಿಯ ನೂತನ ಕಾರ್ಯಕಾರೀ ಸಮಿತಿಯ ರಚನೆಯು ಶನಿವಾರ ಅಕ್ಟೋಬರ್ 2ರಂದು ಮೂಲುಂಡು ಪೂರ್ವದ ಮರಾಠಾ ಮಂದಿರ ಸಭಾಂಗಣದ.ಲ್ಲಿ ಎಸೋಸಿಯೇಶನಿನ ಅದ್ಯಕ್ಷ ಹರೀಶ್.ಜಿ.ಅಮೀನ್ ರವರ ಉಪಸ್ಥಿತಿಯಲ್ಲಿ ನಡೆಯಿತು.
ಸ್ಥಳೀಯ ಕಛೇರಿಯ ಕಾರ್ಯದರ್ಶಿ ಹರೀಶ್.ಎಮ್.ಪೂಜಾರಿಯವರು ಸರ್ವರನ್ನೂ ಸ್ವಾಗತಿಸಿ ಕಳೆದ ಮೂರು ವರ್ಷಗಳ ವರದಿಯನ್ನು ಸಂಕ್ಷಿಪ್ತವಾಗಿ ಓದಿ ವಿವರಿಸಿದರು. ಎಸೋಸಿಯೇಶನಿನ ಗೌರವ ಕಾರ್ಯದರ್ಶಿ ಹರೀಶ್ .ಜಿ.ಸಾಲ್ಯಾನ್ ನೂತನ ಕಾರ್ಯಕಾರಿ ಸಮಿತಿಯ ಯಾದಿಯನ್ನು ಓದಿ ಪದಾಧಿಕಾರಿಗಳ ಮತ್ತು ಸದಸ್ಯರ ಹೆಸರನ್ನು ಪ್ರಕಟಿಸಿದರು ಹಾಗೂ ಶಪಥ ವಿಧಿ ನಡೆಯಿತು.
ಮುಂದಿನ ಮೂರು ವರ್ಷಗಳ ಅವಧಿಗೆ ಗೌರವ ಕಾರ್ಯಾದ್ಯಕ್ಷರಾಗಿ ಕೆ.ಪಿ.ಸಂಜೀವ, ಕಾರ್ಯಾದ್ಯಕ್ಷರಾಗಿ ಶಂಕರ್. ಎಸ್. ಅಮೀನ್, ಉಪ ಕಾರ್ಯಾದ್ಯಕ್ಷರುಗಳಾಗಿ ರವಿ ಕೋಟ್ಯಾನ್ ಮತ್ತು ವಿನಯ್.ವಿ.ಪೂಜಾರಿ, ಕಾರ್ಯದರ್ಶಿಯಾಗಿ ಸತೀಶ್. ಎಮ್. ಪೂಜಾರಿ, ಜತೆ ಕಾರ್ಯದರ್ಶಿಯಾಗಿ ನರೇಶ್ ಅಮೀನ್, ಕೋಶಾಧಿಕಾರಿಯಾಗಿ ಶಂಕರ್. ಜೆ.ಪೂಜಾರಿ, ಜತೆ ಕೋಶಾಧಿಕಾರಿಯಾಗಿ ಶ್ರೀಧರ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್. ಡಿ.ಪೂಜಾರಿ, ಲೋಕನಾಥ್ .ಎ.ಪೂಜಾರಿ, ಡಿ.ಬಿ.ಪೂಜಾರಿ, ವಿಜಯ. ಎಸ್. ಕೋಟ್ಯಾನ್, ಪ್ರಸಾದ್ ಸಾಲ್ಯಾನ್,ರತನ್ ಸಾಲ್ಯಾನ್, ಅಭಿಷೇಕ್ ಸಾಲ್ಯಾನ್(ಯುವ ವಿಭಾಗ) , ಗೀತಾ.ಎಸ್.ಪಾಲನ್(ಮಹಿಳಾ ವಿಭಾಗ) ಮತ್ತು ವಿಶೇಷ ಆಮಂತ್ರಿತ ಸದಸ್ಯರಾಗಿ ಸೋಮಯ್ಯ.ಎ.ಪಾಲನ್, ಸುಶಿಲ್ ಸಾಲ್ಯಾನ್, ಜಯಕರ್ ಉಪ್ಪನ್, ರತ್ನಾಕರ ಸಾಲ್ಯಾನ್, ಸತೀಶ್ ಬಂಗೇರ, ಸುಪ್ರಿಯಾ. ಆರ್.ಪಾಲನ್, ಪ್ರಭಾಕರ್. ಜಿ.ಪೂಜಾರಿ, ಕಿರಣ್ ಬಂಟ್ವಾಳ, ಬಾಲಕೃಷ್ಣ ಕರ್ಕೇರ, ಶಶಿಕಾಂತ್ ಸುವರ್ಣ ಆಯ್ಕೆಯಾದರು. ಎಸೋಸಿಯೇಶನಿನ ಜತೆ ಕಾರ್ಯದರ್ಶಿ ಕೇಶವ ಕೋಟ್ಯಾನ್ ಎಸೋಸಿಯೇಶನಿನ ಧ್ಯೇಯೋದ್ದೇಶದ ಬಗ್ಗೆ ಮಾತನಾಡಿ ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಸ್ಪಂದಿಸಿ ಗುರುತತ್ವವನ್ನು ಪಾಲಿಸೋಣ ಎಂದರು.
ಎಸೋಸಿಯೇಶನಿನ ಉಪಾಧ್ಯಕ್ಷ ಹಾಗೂ ಮೂಲುಂಡ್ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾದ್ಯಕ್ಷ ಕೆ.ಸುರೇಶ್ ಕಮಾರ್ ಮಾತನಾಡಿ ನಿರಂತರ ನಾಲ್ಕು ಅವಧಿಯಲ್ಲಿ ಕಾರ್ಯಾದ್ಯಕ್ಷನಾಗಿ ಸೇವೆ ಸಲ್ಲಿಸಿ ಪ್ರಸ್ತುತ ವರ್ಷದಲ್ಲಿ ಕೇಂದ್ರ ಕಛೇರಿಯಲ್ಲಿ ಸೇವೆ ಮಾಡುವ ಅವಕಾಶ ನಿಮ್ಮೆಲ್ಲರ ಸಹಕಾರದಿಂದ ದೊರಕಿದೆ. ನಾವೆಲ್ಲ ಒಟ್ಟು ಸೇರಿ ನವ ಸಮಾಜದ ನಿರ್ಮಾಣ ಮಾಡುವ ಎಂದರು.
ನೂತನ ಕಾರ್ಯಾದ್ಯಕ್ಷ ಶಂಕರ್. ಎಸ್.ಅಮೀನ್ ರವರು ತನಗೆ ಸ್ಥಳೀಯ ಸಮಿತಿಯ ಕಾರ್ಯಾದ್ಯಕ್ಷ ಹುದ್ದೆ ಕೊಟ್ಟು ಅಲಂಕರಿಸಿದ ಸದಸ್ಯರನ್ನು ಅಭಿನಂದಿಸಿ ಹುದ್ದೆಗೆ ಯಾವುದೇ ಚ್ಯುತಿ ಬಾರರದಂತೆ ನಿಭಾಯಿಸುವೆ ಎಂದು ಹೇಳುತ್ತಾ ಸದಸ್ಯರು ಈ ಹಿಂದಿನ ಸಮಿತಿಗೆ ಕೊಟ್ಟ ಪ್ರೋತ್ಸಾಹದಂತೆ ಈಗಿನ ಸಮಿತಿಯನ್ನೂ ಉತ್ತಮ ಸಮಾಜ ಸೇವೆ ಮಾಡಲು ಒಗ್ಗಟ್ಟಿನಿಂದ ಸಹಕರಿಸಬೇಕೆಂದು ವಿನಂತಿಸಿದರು.
ಸದಸ್ಯರಿಗೆ ವೈದ್ಯಕೀಯ ನೆರವು, ಆರ್ಥಿಕ ನೆರವು,ವಿದ್ಯಾರ್ಥಿ ವೇತನ ಹಾಗೂ ಕೋವಿಡ್ ಸಮಯದಲ್ಲಿ ಅಪಾರ ಸಮಾಜ ಸೇವೆ ಮಾಡಿದ್ದ ಸರ್ವ ಮೂಲುಂಡ್ ಕಛೇರಿಯ ಸದಸ್ಯರನ್ನು ಅಭಿನಂದಿಸಿ ಎಸೋಸಿಯೇಶನಿನ ಅದ್ಯಕ್ಷ ಹರೀಶ್. ಜಿ.ಅಮೀನ್ ಮಾತನಾಡಿ ನಮ್ಮ ಹಿರಿಯರು ಈ ಸಂಸ್ಥೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟು ಹಾಕಿ ಅದರ ಮುಖೇನ 22 ಸ್ಥಳೀಯ ಕಛೇರಿಗಳನ್ನು ಸ್ಥಾಪಿಸಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮಾಜ ಬಾಂಧವರನ್ನು ಒಟ್ಟುಗೂಡಿಸುವಂತಹ ಒಳ್ಳೆಯ ಕೆಲಸ ಮಾಡಿದ್ದಾರೆ. ತೊಂದರೆಯಲ್ಲಿರುವ ಬಾಂಧವರನ್ನು ಗುರುತಿಸಿ ಸಹಾಯಹಸ್ತ ನೀಡಬೇಕು. ಎಸೋಸಿಯೇಶನಿನ ಸರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಸ್ಥೆಯ ಹಲವಾರು ನೂತನ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕರಿಸಬೇಕು ಎಂದರು. ಉಪಸ್ಥಿತ ಎಸೋಸಿಯೇಶನಿನ ಪದಾಧಿಕಾರಿಗಳು, ಆಮಂತ್ರಿತ ಅತಿಥಿಗಳು ಹಾಗೂ ದಾನಿಗಳನ್ನು ಹೂಗುಚ್ಚ ನೀಡಿ ಸತ್ಕರಿಸಲಾಯಿತು. ಆರಂಭದಲ್ಲಿ ಗೀತಾ.ಎಸ್.ಪಾಲನ್, ವಿಮಲಾಕ್ಷಿ ಕರ್ಕೇರ ಐಯರ್,ಮತ್ತು ಹೇಮಲತಾ ಪೂಜಾರಿಯವರಿಂದ ಪ್ರಾರ್ಥನೆ ನಡೆದು ಹರೀಶ್. ಡಿ.ಕರ್ಕೇರ, ಮೀನಾಕ್ಷಿ .ವಿ.ಜತ್ತನ್, ಅಪರ್ಣ. ಸಿ.ಕೋಟ್ಯಾನ್, ವಿನಯ್. ವಿ.ಪೂಜಾರಿ ಹಾಗೂ ವಿನಯ ಪಾಲನ್ ರವರಿಂದ ಭಕ್ತಿ ಸುಧಾ ಸಂಗೀತ ಕಾರ್ಯಕ್ರಮ ನಡೆಯಿತು. ಗುರು ಪೂಜೆ, ಮಂಗಳಾರತಿ ನಡೆದು ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಎಸೋಸಿಯೇಶನಿನ ಗೌರವ ಕಾರ್ಯದರ್ಶಿ ಹರೀಶ್. ಜಿ.ಸಾಲ್ಯಾನ್ ನಿರೂಪಿಸಿದರು. ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರೀಶ್. ಎಮ್.ಪೂಜಾರಿ ವಂದಿಸಿದರು. ಇತ್ತೀಚೆಗೆ ನಿಧನರಾದ ಸಮಿತಿಯು ಸ್ಥಾಪಕ ಕಾರ್ಯಾದ್ಯಕ್ಷ ಶಿವರಾಮ. ಕೆ.ಸನಿಲ್ ರವರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನೂತನ ಸಮಿತಿ ರಚನೆಯ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಷನ್‌ ಉಪಾಧ್ಯಕ್ಷರುಗಳಾದ ಶಂಕರ ಡಿ ಪೂಜಾರಿ ,ಜಯಂತಿ ವರದ ಉಳ್ಳಾಲ್, ಧರ್ಮಪಾಲ ಜಿ ಅಂಚನ್ ,ಕೆ ಸುರೇಶ್ ಕುಮಾರ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಕೇಶವ್ ಕೆ ಕೋಟ್ಯಾನ್, ವಿಶ್ವನಾಥ್ ಆರ್ ತೋನ್ಸೆ, ಅಶೋಕ್ ಕುಕ್ಯಾನ್ ಸಸಿಹಿತ್ಲು, ಜೊತೆ ಕೋಶಾಧಿಕಾರಿಗಳಾದ ಮೋಹನ್ ಡಿ ಪೂಜಾರಿ ,ಹರಿಶ್ಚಂದ್ರ ಜಿ ಕುಂದರ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಕುಂತಳ ಕೆ ಕೋಟ್ಯಾನ್, ಜಿ ಓ ಸಿ ಗಣೇಶ್ ಪೂಜಾರಿ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರ್, ಗೌರವ ಕಾರ್ಯದರ್ಶಿ ನವೀನ್ ಎಲ್ ಬಂಗೇರ, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಆರ್ ಪೂಜಾರಿ, ಗೌರವ ಕಾರ್ಯದರ್ಶಿ ನವೀನ್ ಪೂಜಾರಿ ಪಡು ಇನ್ನ, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಧ್ಯಕ್ಷ ಮೋಹನ್ ದಾಸ್ ಜಿ .ಪೂಜಾರಿ, ಸೇವಾದಳದ ಕಾರ್ಯಧ್ಯಕ್ಷ ನಾಗೇಶ್ ಎಂ ಕೋಟ್ಯಾನ್, ಶುಭಮಂಗಳ ಉಪ ಸಮಿತಿಯ ಗೌರವ ಕಾರ್ಯಾದ್ಯಕ್ಸೆ ಬಬಿತಾ ಜೆ ಕೋಟ್ಯಾನ್, ಸದಸ್ಯ ಮೋಹನ್ ಸಿ ಕೋಟ್ಯಾನ್, ಅಂದೇರಿ ಸ್ಥಳೀಯ ಕಚೇರಿಯ ಗೌ. ಕಾರ್ಯದರ್ಶಿ ಹರೀಶ್ ಶಾಂತಿ , ಭಾರತ್ ಬ್ಯಾಂಕಿನ ನಿರ್ದೇಶಕ ಪುರುಷೋತ್ತಮ ಎಸ್ ಕೋಟ್ಯಾನ್,ರಾಜಾ.ವಿ.ಸಾಲ್ಯಾನ್, ಜ್ಯೋತಿ ಸುವರ್ಣ , ಭಾರತ್ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾನಂದ.ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Comment

Translate »