Home Kannada ಬಂಟ್ಸ್ ಫೋರಮ್ ಮೀರಾಭಾಯಂದರ್ ವತಿಯಿಂದ ಡಾ.ಸಾಕ್ಷಾತ್ ಶೆಟ್ಟಿಗೆ ಅಭಿನಂದನೆ.

ಬಂಟ್ಸ್ ಫೋರಮ್ ಮೀರಾಭಾಯಂದರ್ ವತಿಯಿಂದ ಡಾ.ಸಾಕ್ಷಾತ್ ಶೆಟ್ಟಿಗೆ ಅಭಿನಂದನೆ.

by akash

ವರದಿ: ಉಮೇಶ್.ಕೆ.ಅಂಚನ್. 9324759589. ಬಂಟ್ಸ್ ಫೋರಮ್ ಮೀರಾಭಾಯಂದರ್ ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 46ನೇ ಸ್ಥಾನ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಐದನೇ ಸ್ಥಾನ ಪಡೆದು ಸಾಧನೆಗೈದ ಮೀರಾಭಾಯಂದರ್ ಪರಿಸರದ ಜಯಶ್ರೀ ಮತ್ತು ಬಾಲಕೃಷ್ಣ ಶೆಟ್ಟಿ ದಂಪತಿಗಳ ಸುಪುತ್ರ ಡಾ.ಸಾಕ್ಷಾತ್ ಶೆಟ್ಟಿಯವರನ್ನು ಫೋರಮಿನ ಕಛೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಸಂಸ್ಥೆಯ ಅದ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮಾತನಾಡಿ ಇದು ಸಮಾಜಕ್ಕೆ ಹಾಗೂ ತುಳುಕನ್ನಡಿಗರಿಗೆ ಲಭಿಸಿದ ಶ್ರೇಷ್ಠ ಗೌರವ ಹಾಗೂ ಡಾ.ಶೆಟ್ಟಿಯವರ ಮುಂದಿನ ವೈದ್ಯಕೀಯ ಸೇವೆ ಉತ್ತಮ ರೀತಿಯಲ್ಲಿ ನಡೆಯಲಿ ,ಸಮಾಜದ ಬಗ್ಗೆ ,ದೀನದಲಿತರ ಬಗ್ಗೆ ಚಿಂತನೆ ಸದಾ ಇರಲಿ ಎಂದು ಆಶೀರ್ವಾದಿಸಿ ಶುಭಹಾರೈಸಿದರು.
ಸನ್ಮಾನ ಅಭಿನಂದನೆ ಸ್ವೀಕರಿಸಿದ ಡಾ.ಸಾಕ್ಷಾತ್ ಶೆಟ್ಟಿಯವರು ಸಂತೋಷ ವ್ಯಕ್ತಪಡಿಸಿ ತಂದೆ ತಾಯಿಯರ ಆಶಯದಂತೆ ಸಮಾಜಕ್ಕೆ ಕೈಲಾದ ಸೇವೆ ಮಾಡುವ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಸಂಚಾಲಕ ದಿವಾಕರ ಶೆಟ್ಟಿ ಶಿರ್ಲಾಲ್, ಕೋಶಾಧಿಕಾರಿ ರಮೇಶ್ ಕೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾದಕ್ಷೆ ಸುಮತಿ.ಕೆ.ಶೆಟ್ಟಿ, ಯುವ ವಿಭಾಗದ ಕಾರ್ಯದ್ಯಕ್ಷ ಉದಯ ಶೆಟ್ಟಿ ಮಲಾರ್ ಬೀಡು, ಮಾಜಿ ಅದ್ಯಕ್ಷ ಜಯಪ್ರಕಾಶ್. ಆರ್. ಭಂಡಾರಿ, ಸತೀಶ್.ಪಿ.ಶೆಟ್ಟಿ, ಹರೀಶ್ ಶೆಟ್ಟಿ ಕಾಪು, ಅನಿಲ್ ಶೆಟ್ಟಿ, ಆನಂದ್ ಶೆಟ್ಟಿ ಕುಕ್ಕುಂದೂರು, ಸಾಂತೂರು ಶುಭದೀಪ್ ಶೆಟ್ಟಿ, ಶೈಲೇಶ್ ಶೆಟ್ಟಿ ಸೂಡ, ಸೀತಾರಾಮ್ ಶೆಟ್ಟಿ ಅಮವಾಸ್ಯೆಬೈಲು, ಪ್ರತಿಭಾ ರವಿ ಶೆಟ್ಟಿ, ವಿಜಯಲಕ್ಷ್ಮೀ. ಡಿ.ಶೆಟ್ಟಿ, ಸುಖಾವಾಣಿ.ಡಿ.ಶೆಟ್ಟಿ, ಸುಜಾತಾ ಶೆಟ್ಟಿ, ವೀಣಾ ಶೆಟ್ಟಿ, ಉಷಾ ಶೆಟ್ಟಿ, ಶ್ರೀಮತಿ ಶೆಟ್ಟಿ, ಮಲ್ಲಿಕಾ .ಕೆ.ಶೆಟ್ಟಿ, ಪ್ರೇಮಾ ಮಾಧವ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯದರ್ಶಿ ಹರ್ಷಕುಮಾರ್.ಡಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Comment

Translate »